Advanced Search
Welcome to Anuvada Sampada Repository

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜನವರಿ 2021 : ಕೋವಿಡ್‌-19ರ ಬಗ್ಗೆ ನಮಗೇನು ಗೊತ್ತು?

ಸಂಪಾದಕರು, (2021) ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜನವರಿ 2021 : ಕೋವಿಡ್‌-19ರ ಬಗ್ಗೆ ನಮಗೇನು ಗೊತ್ತು? ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 1-136.

[img] Fulltext Document
What do we know about COVID-19 ಕೋವಿಡ್‌-19ರ ಬಗ್ಗೆ ನಮಗೇನು ಗೊತ್ತು.pdf - Published Version

Download (16MB)

Introduction

ಈ ಸಂಚಿಕೆಯು ಸರ್ವವ್ಯಾಪಿ ವ್ಯಾಧಿಯ ಮೇಲೆ ಬೆಳಕು ಚೆಲ್ಲುತ್ತದೆ. ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಸೋಂಕುಶಾಸ್ತ್ರಜ್ಞರು ಯಾವ ಕಾರ್ಯತಂತ್ರಗಳನ್ನು ಬಳಸುತ್ತಾರೆ ಎಂಬುದನ್ನು ನೋಡುವುದಕ್ಕಾಗಿ ʻಮೂಲಭೂತ ವಿಚಾರಗಳನ್ನುʼ ಓದಿರಿ. ವೈರಾಣುಗಳು ಬದುಕಿನ ಅತ್ಯಂತ ಸಂಕೀರ್ಣ ಅಥವಾ ಅತ್ಯಂತ ಸರಳ ರೂಪಗಳಾಗಿವೆಯೇ? ಇಪ್ಪತ್ತನೇ ಶತಮಾನದಿಂದ ಈಚೆಗೆ ಪ್ರಾಣಿಗಳಿಂದ ಮನುಷ್ಯರಿಗೆ ಹೊಸ ರೋಗಗಳು ಹರಡುವುದರಲ್ಲಿ ಹೆಚ್ಚಳ ಉಂಟಾಗಲು ಕಾರಣವೇನು? ʻಸೋಂಕುʼ ವಿಭಾಗದಲ್ಲಿ, ಸಾರ್ಸ್-ಕೋವಿ 2 ರೋಗವು ನೈಸರ್ಗಿಕ ವಿಕಸನದಿಂದಾಗಿ ಉಂಟಾಗಿದೆ ಎಂಬುದಾಗಿ ನಾವೇಕೆ ನಂಬುತ್ತೇವೆ? ಪ್ರಸ್ತುತ ಮಹಾಮಾರಿಯಿಂದಾಗಿ ಉಂಟಾಗಿರುವ ಸಾವಿನ ಲೆಕ್ಕಾಚಾರವು ಎಷ್ಟು ನಿಖರವಾಗಿದೆ? ಅಥವಾ ಪ್ರಕೃತಿ ಮತ್ತು ಸಾಮಾಜಿಕ ಒಡನಾಟದ ಹಿನ್ನೆಲೆಯು ಹೀಗೆ ಕೋವಿಡ್‌ - 19 ಹರಡುವಿಕೆಯ ಮೇಲೆ ಪರಿಣಾಮ ಬೀರುತ್ತದೆ? ಮುಂತಾದ ವಿಚಾರಗಳಿಗೆ ಉತ್ತರವನ್ನು ಕಂಡುಹಿಡಿಯುವ ಯತ್ನವನ್ನು ಮಾಡಲಾಗಿದೆ. ʻನಮ್ಮ ಪ್ರತಿಕ್ರಿಯೆʼ ವಿಭಾಗದಲ್ಲಿ, ಸಾರ್ಸ್‌-ಕೋವಿ 2 ವಿರುದ್ಧ ಲಸಿಕೆಯ ವಿನ್ಯಾಸ ಮತ್ತು ತಯಾರಿಯು ಅನಿಶ್ಚಿತತೆಯಿಂದ ಕೂಡಿದೆ ಹಾಗೂ ಇದಕ್ಕೆ ಯಾಕೆ ಸಾಕಷ್ಟು ಸಮಯ ಬೇಕು? ಸಮ್ಮತಿ ನೀಡುವ ಆರೋಗ್ಯಯುತ ವ್ಯಕ್ತಿಗಳನ್ನು ದುರ್ಬಲಗೊಳಿಸಿದ ಸಾರ್ಸ್-ಕೋವಿ 2 ವೈರಾಣುವಿನ ರೂಪಕ್ಕೆ ಉದ್ದೇಶಪೂರ್ವಕವಾಗಿ ಒಡ್ಡುವುದರಿಂದ ನಾವೇನು ಕಲಿಯಬಹುದು? ಸಂಪರ್ಕದ ಜಾಡನ್ನು ಹಿಡಿಯಲು ಮತ್ತು ಜನಸಂಖ್ಯಾವಾರು ತಪಾಸಣೆಗೆ ಯಾವ ಪರೀಕ್ಷೆಗಳು ಹೆಚ್ಚು ಪರಿಣಾಮಕಾರಿ? ಸಾರ್ಸ್‌-ಕೋವಿ 2 ವಿರುದ್ಧ ನಾವು ಹೇಗೆ ವೈರಾಣು ನಿರೋಧಕಗಳನ್ನು ಗುರುತಿಸಬಹುದು? ಟೆಸ್ಟಿಂಗ್‌ ಕಿಟ್‌ ಗಳ ಅನುಪಸ್ಥಿತಿಯಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರು ಕೋವಿಡ್‌-19 ರೋಗನಿರ್ಣಯ ಮಾಡಬಹುದೇ? ಪರಿಣಾಮಕಾರಿ ಆರೋಗ್ಯ ರಕ್ಷಣೆಗಾಗಿ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ನೀಡುವುದು ಏಕೆ ಅಗತ್ಯ? ನಮ್ಮ ಅನುಕೂಲತೆಗಾಗಿ ಹಿಂಡು ಪ್ರತಿಬಂಧಕತೆಯನ್ನು ಬಳಸುವುದಕ್ಕಾಗಿ ʻರಿವರ್ಸ್‌ ಕ್ವಾರಂಟೈನ್‌ʼ ವಿಧಾನವು ನಮಗೆ ಹೇಗೆ ಸಹಾಯ ಮಾಡುತ್ತದೆ? ಇತ್ಯಾದಿ ವಿಚಾರಗಳನ್ನು ನಾವು ಅರಿತುಕೊಳ್ಳಲಿದ್ದೇವೆ. ಅಷ್ಟೇ ಅಲ್ಲ. ಹಿರಿಯರು, ಮಕ್ಕಳು ಮತ್ತು ಕ್ವಾರಂಟೈನ್‌ ಗೆ ಒಳದಾದ ವ್ಯಕ್ತಿಗಳ ಮಾನಸಿಕ ಆರೋಗ್ಯದ ಕುರಿತ ಕಾಳಜಿ ಮತ್ತು ಮನೋಭಾವಗಳನ್ನು ಅರಿತುಕೊಳ್ಳುವುದಕ್ಕಾಗಿ ಅಥವಾ ಸಾರ್ಸ್-ಕೋವಿ 2 ಗೆ ಸಂಬಂಧಿಸಿದ ಸುಳ್ಳುಗಳನ್ನು ತೊಡೆದುಹಾಕಲು ನೀವು ಸಂಪನ್ಮೂಲಗಳನ್ನು ಹುಡುಕುತ್ತಿದ್ದೀರಾ? ಇದಕ್ಕಾಗಿ ನಮ್ಮ ತುಣುಕುಗಳನ್ನು ನೋಡಿರಿ.

Item Type: Periodicals
Discipline: Science
Science Education
Programme: University Publications > i wonder...
Title(English): i wonder… Rediscovering School Science : January 2021 : What do we know about COVID-19?
Journal or Publication Title(English): i wonder... Rediscovering School Science
URI: http://anuvadasampada.azimpremjiuniversity.edu.in/id/eprint/3257
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.