Advanced Search
Welcome to Anuvada Sampada Repository

ಕಾರ್ಖಾನೆಗೆ ಅತೀತವಾದ ಜಾಗತೀಕರಣ, ಉತ್ಪಾದನೆಯ ಅನೌಪಚಾರಿಕೀಕರಣ ಮತ್ತು ಶ್ರಮದ ಹೊಸ ನೆಲೆಗಳು

ಸನ್ಯಾಲ್, ಕಲ್ಯಾಣ್ and ಭಟ್ಟಾಚಾರ್ಯ, ರಾಜೇಶ್ (2009) ಕಾರ್ಖಾನೆಗೆ ಅತೀತವಾದ ಜಾಗತೀಕರಣ, ಉತ್ಪಾದನೆಯ ಅನೌಪಚಾರಿಕೀಕರಣ ಮತ್ತು ಶ್ರಮದ ಹೊಸ ನೆಲೆಗಳು ಆರ್ಥಿಕ ಮತ್ತು ರಾಜಕೀಯ ಸಾಪ್ತಾಹಿಕ, 44 (22). ISSN ISSN (Print) - 0012-9976 | ISSN (Online) - 2349-8869

[img] Fulltext Document
Beyond the factory.pdf

Download (495kB)

Introduction

ಈ ಪ್ರಬಂಧವು ಅನೌಪಚಾರಿಕೀಕರಣಕ್ಕೆ ಒಳಗಾದ ಸ್ವಯಂಉದ್ಯೋಗದ ವಿದ್ಯಮಾನವನ್ನು ಮತ್ತು ಕಾರ್ಮಿಕ ಚಳುವಳಿಗಳ ಸಂಭಾವ್ಯ ಹೊಸ ಸ್ವರೂಪಗಳನ್ನು ಕುರಿತ ಅದರ ಪರಿಣಾಮಗಳನ್ನು ಮುನ್ನೆಲೆಗೆ ತರುತ್ತದೆ. ಶ್ರಮದ ಹೊಸ ಸ್ಥಳವನ್ನು ನಿರೂಪಿಸುವ ಸಂಬಂಧದಲ್ಲಿ ಶ್ರಮಿಕನು ಇನ್ನೆಂದಿಗೂ ಮಿಗುತಾಯದ ಮೂಲವಲ್ಲ, ಬದಲಿಗೆ ಆತ/ಆಕೆ ಆರ್ಥಿಕ ಸಂಪನ್ಮೂಲದ ಅನಗತ್ಯ ಒಡೆಯ/ಒಡತಿ ಅಥವಾ ಅದನ್ನು ವಶದಲ್ಲಿಟ್ಟುಕೊಂಡಿರುವ ವ್ಯಕ್ತಿಯಾಗಿದ್ದು, ಬಂಡವಾಳದ ಪರಿಚಲನೆಯಲ್ಲಿ ಉಪಯೋಗಿಸಿಕೊಳ್ಳಲು ಆತನಿಂದ/ಆಕೆಯಿಂದ ಆ ಸಂಪನ್ಮೂಲಗಳನ್ನು ಬೇರ್ಪಡಿಸುವುದು ಅಗತ್ಯ. ಅವರನ್ನು ಕಾರ್ಮಿಕರನ್ನಾಗಿಸದೆ ಅಥವಾ ಶೋಷಿಸದೆ ಅವರು ಆಸ್ತಿಯನ್ನು ಕಳೆದುಕೊಳ್ಳುವಂತೆ ಮಾಡುವ ಪ್ರಕ್ರಿಯೆಯನ್ನು ಹೊರಗಿಡುವಿಕೆ ಎಂದು ಹೇಳಲಾಗುತ್ತದೆ. ಕೂಲಿ-ಕೆಲಸ ಮತ್ತು ಬಂಡವಾಳದ ನಡುವಿನ ರೂಢಿಗತ ವೈರುಧ್ಯವನ್ನು, ಬಂಡವಾಳ ಮತ್ತು ಮಿಗುತಾಯ ಶ್ರಮಿಕ ವರ್ಗದ ಮಧ್ಯದ ವೈರುಧ್ಯವು ಮರೆಮಾಡುತ್ತದೆ. ಕೂಲಿ-ಕಾರ್ಮಿಕವರ್ಗವನ್ನು ಶೋಷಿಸುವುದರ ಮೇಲೆಯೇ ಗಮನವನ್ನು ಕೇಂದ್ರೀಕರಿಸುತ್ತಿದ್ದ ವರ್ಗ ರಾಜಕೀಯವು, ಶ್ರಮವನ್ನು ಹೊರಗಿಡುವುದರ ಸುತ್ತಲೂ ರೂಪುಗೊಳ್ಳುತ್ತಿರುವ ಮತ್ತೊಂದು ಮಹಾನ್ ರಾಜಕೀಯ ಚಳುವಳಿಯನ್ನು ನಿರ್ವಹಿಸಲು ತನ್ನನ್ನೇ ಮತ್ತೊಮ್ಮೆ ಆವಿಷ್ಕರಿಸಿಕೊಳ್ಳಬೇಕಿದೆ.

Item Type: Article
Discipline: Political Economy of Education
Programme: Postgraduate Programmes > MA in Education
Title(English): Beyond the Factory: Globalisation, Informalisation of Production and the New Location of Labour
Publisher: Economic and Political Weekly
Journal or Publication Title(English): Economic and Political Weekly
Contributors: Manjunath BR, J.S. Sadananda and Shailaja GP
URI: http://anuvadasampada.azimpremjiuniversity.edu.in/id/eprint/4024
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.