Advanced Search
Welcome to Anuvada Sampada Repository

ಬ್ಲೂಮ್‌ರವರ ವರ್ಗೀಕರಣ

ಓರೆ, ಎಂ. ಬ್ಲೂಮ್‌ರವರ ವರ್ಗೀಕರಣ In: ಕಲಿಕೆ, ಬೋಧನೆ ಮತ್ತು ತಂತ್ರಜ್ಞಾನದ ಮೇಲೆ ಉದಯೋನ್ಮುಖ ದೃಷ್ಟಿಕೋನಗಳು. Creative Commons.

[img] Fulltext Document
Bloom's taxonomy.pdf

Download (243kB)

Introduction

ಶಿಕ್ಷಣ ತಜ್ಞರು ಎದುರಿಸುತ್ತಿರುವ ಮೂಲಭೂತ ಪ್ರಶ್ನೆ ಏನೆಂದರೆ "ಮಾನವನ ಆಲೋಚನೆಗಳನ್ನು ಸುಧಾರಿಸುವ ಬಗೆ ಹೇಗೆ ಎಂಬುದಾಗಿದೆ. ಅದನ್ನು ಸುಧಾರಿಸಲು ಆಲೋಚನೆಯ ಸ್ವರೂಪವನ್ನು ವ್ಯಾಖ್ಯಾನಿಸುವುದರಿಂದ ಪ್ರಾರಂಭಿಸಬೇಕಾಗುತ್ತದೆ. ಈಗಿರುವ ಜ್ಞಾನವನ್ನು ಉತ್ತಮ ಗೊಳಿಸಲು ʼಆಲೋಚನೆ ಎಂದರೇನು‘ ಎಂಬ ಕುರಿತು ಈ ಪ್ರಬಂಧದಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಬೆಂಜಮಿನ್ ಎಸ್. ಬ್ಲೂಮ್ ಆಲೋಚನೆಯ ಸ್ವರೂಪದ ಬಗ್ಗೆ ಸವಿಸ್ತಾರವಾಗಿ ಆಲೋಚಿಸಿದ ಚಿಂತಕರಾಗಿದ್ದಾರೆ. ಬ್ಲೂಮ್ರವರ ಮೊದಲ ಶಿಷ್ಯರಾದ ಎಲಿಯೆಟ್ ಡಬ್ಲ್ಯೂ ಐಸ್ನರ್ "ಕಂಡುಹಿಡಿಯುವ ಪ್ರಕ್ರಿಯೆಯನ್ನು ಅವರು ಗಾಢವಾಗಿ ಪ್ರೀತಿಸುತ್ತಿದ್ದರು. ಕಂಡುಹಿಡಿಯುವಿಕೆಯೇ ಅವರ ಶ್ರೇಷ್ಠ ಸಾಧನೆಯಾಗಿದೆ. ಬ್ಲೂಮ್ಸ್ ಮಹತ್ವದ್ದನ್ನು ತಕ್ಷಣ ಗುರುತಿಸುತ್ತಿದ್ದರು. ಬ್ಲೂಮ್ರವರ ವರ್ಗೀಕರಣವು ಮೊದಲ ಬಾರಿ ಪ್ರಕಟಗೊಂಡಾಗ ಹೆಚ್ಚು ಗಮನ ಸೆಳೆಯಲಿಲ್ಲವಾದರೂ ನಂತರದಲ್ಲಿ 22 ಭಾಷೆಗಳಲ್ಲಿ ಭಾಷಾಂತರವಾಯಿತು. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಾಗಿರುವ ಹಾಗೂ ಅಧಿಕ ಬಾರಿ ನಮೂದಿಸಿರುವ ಉಲ್ಲೇಖಗಳಲ್ಲಿ ಅವರ ವರ್ಗೀಕರಣವೂ (ಟ್ಯಾಕ್ಸಾನಮಿ) ಒಂದಾಗಿದೆ.

Item Type: Book Section
Discipline: Curriculum Studies
Programme: Postgraduate Programmes > MA in Education
Title(English): Bloom's taxonomy
Publisher: Creative Commons
Title of Book(English): Emerging perspectives on learning, teaching, and technology
Contributors: Sreenivasan Anand, Niranjan Dass and T.N. Vasudevamurthy
URI: http://anuvadasampada.azimpremjiuniversity.edu.in/id/eprint/4027
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.