Advanced Search
Welcome to Anuvada Sampada Repository

ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳ ಕುರಿತ೦ತೆ ರಾಷ್ಟ್ರೀಯ ಕೇ೦ದ್ರ ತ೦ಡದ ಪ್ರೌಢ ಲೇಖನ

., ಎನ್ ಸಿ ಇ ಆರ್ ಟಿ ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳ ಕುರಿತ೦ತೆ ರಾಷ್ಟ್ರೀಯ ಕೇ೦ದ್ರ ತ೦ಡದ ಪ್ರೌಢ ಲೇಖನ Other. NCERT.

[img] Fulltext Document
NCERT_Curriculum Syllabus and textbooks.pdf

Download (809kB)

Introduction

ಭಾರತೀಯ ಶಾಲಾ ಶಿಕ್ಷಣ ವ್ಯವಸ್ಥೆ ಏಕರೂಪಿಯಾದುದು, ಸಿದ್ಧ ಮಾದರಿಯದ್ದು, ಪರೀಕ್ಷಾ ಕೇಂದ್ರಿತವಾದುದು. ಈ ವ್ಯವಸ್ಥೆಯ ಪಠ್ಯಕ್ರಮ ಶಿಕ್ಷಕರನ್ನೂ, ವಿದ್ಯಾರ್ಥಿಗಳನ್ನೂ ಬಳಲಿಸಿದೆ, ಶಿಕ್ಷಣದಲ್ಲಿ ನಿರಾಸಕ್ತರಾಗುವಂತೆ ಮಾಡಿದೆ. ಪ್ರಸ್ತುತ ಪ್ರಬಂಧವಾದರೂ ಪಠ್ಯಕ್ರಮವನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಶಿಕ್ಷಣದ ಮೂಲಕ ಸಮಾನತೆಯನ್ನು ಸಾಧಿಸಬೇಕೆಂಬುದು ಈ ಪ್ರಬಂಧದ ಖಚಿತ ನಿಲುವಾಗಿದೆ. ವೈವಿಧ್ಯಮಯವಾದ ಭಾರತ ದೇಶದಲ್ಲಿ ವಿಕೇಂದ್ರೀಕರಣದ ಮೂಲಕ ಪಠ್ಯಕ್ರಮವನ್ನು ಅರ್ಥಪೂರ್ಣವಾಗಿಸಬಹುದು ಎಂದು ಈ ಪ್ರಬಂಧ ಸೂಚಿಸುತ್ತದೆ. ಪ್ರಸ್ತುತ ಪ್ರಬಂಧವು ಕಲಿಕೆಯ ವ್ಯವಸ್ಥೆಯನ್ನು ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯವಿಷಯವೆಂದು ಮೂರು ರೀತಿಗಳಲ್ಲಿ ವಿಂಗಡಿಸುತ್ತದೆ. ಪಠ್ಯಕ್ರಮವನ್ನು ರೂಪಿಸುವಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಸ್ವಾಯತ್ತತೆ ಹೊಂದಿರಬೇಕೆಂದು ಪ್ರತಿಪಾದಿಸುತ್ತದೆ. ಶಿಕ್ಷಣವು ವಿದ್ಯಾರ್ಥಿಗಳಿಗೆ ಸಾಮಾಜಿಕ ರಾಜಕೀಯ ಆಶೋತ್ತರಗಳನ್ನು ಈಡೇರಿಸಿಕೊಳ್ಳುವ ಮಾರ್ಗವನ್ನು ತೋರಿಸಿಕೊಡಬೇಕು ಎಂಬುದು ಈ ಪ್ರಬಂಧದ ನಂಬಿಕೆಯಾಗಿದೆ. ಜೊತೆಗೆ ಮಕ್ಕಳಲ್ಲಿ ಸಮಾನತೆ, ಸ್ವಾತಂತ್ರ್ಯ ಮುಂತಾದ ಸಂವಿಧಾನ ಗೌರವಿಸುವ ಮೌಲ್ಯಗಳನ್ನು ಬೆಳೆಸುವುದೂ ಶಿಕ್ಷಣದ ಜವಾಬ್ದಾರಿಯಾಗಿದೆ ಎಂದು ಇದು ಆಗ್ರಹಿಸುತ್ತದೆ. ತರಗತಿಯಲ್ಲಿ ಬೋಧಿಸುವ ವಿಧಾನ, ವಿದ್ಯಾರ್ಥಿಗಳ ಅನುಭವವನ್ನು ಕಲಿಕೆಯ ಮಾರ್ಗವನ್ನಾಗಿಸುವ ಕೌಶಲ ಮತ್ತು ಮೌಲ್ಯಮಾಪನದ ಮಿತಿಗಳನ್ನೂ ಇದು ವಿಸ್ತೃತವಾಗಿ ತಿಳಿಸಿಕೊಡುತ್ತದೆ.

Item Type: Monograph (Other)
Discipline: Curriculum Studies
Programme: Postgraduate Programmes > MA in Education
Title(English): Position Paper National Focus Group On Curriculum, Syllabus And Textbooks
Publisher: NCERT
Contributors: Sreenivasan Anand, Niranjan Dass and T.N. Vasudevamurthy
URI: http://anuvadasampada.azimpremjiuniversity.edu.in/id/eprint/4028
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.