Advanced Search
Welcome to Anuvada Sampada Repository

ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ

ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್, (2021) ಕೋವಿಡ್-19 ಪಿಡುಗಿನ ಕಾಲಾವಧಿಯಲ್ಲಿ ಮಕ್ಕಳ ಕಲಿಕೆಯಲ್ಲಾದ ನಷ್ಟ Other. Azim Premji Foundation. (Unpublished)

[img] Fulltext Document
loss-learning-during-pandemic-kannada.pdf

Download (3MB)

Introduction

ಕೋವಿಡ್-19 ಪಿಡುಗಿನಿಂದ ಶಾಲೆಗಳು ಮುಚ್ಚಿದ್ದವು. ಆದ್ದರಿಂದ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದ ಸಂಪರ್ಕದಿಂದ ಸಂಪೂರ್ಣವಾಗಿ ದೂರವಾದರು. ತರಗತಿಯಲ್ಲಿನ ಕಲಿಕೆಯು ಲಭಿಸದೆ ಒಂದು ಇಡೀ ಶೈಕ್ಷಣಿಕ ವರ್ಷವೇ ಕಳೆದುಹೋಗಿದೆ. ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಕಲಿತಿದ್ದನ್ನು ಮರೆತಿದ್ದಾರೆ. ಇದರಲ್ಲಿ ಅರ್ಥಬದ್ಧ ಓದುವಿಕೆ ಮತ್ತು ಕೂಡುವುದು ಹಾಗೂ ಗುಣಾಕಾರದಂತಹ ಬುನಾದಿ ಸಾಮರ್ಥ್ಯಗಳು ಸೇರಿವೆ. ಹಿಂದಿನ ವರ್ಷ, ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷದ ಕಲಿಕಾ ನಷ್ಟಗಳಿಗೆ ಇದು ಕಾರಣವಾಗಿದೆ. ಅಜೀಂ ಪ್ರೇಮ್ ಜಿ ಫೌಂಡೇಷನ್ 2021ರಲ್ಲಿ ಒಂದು ಅಧ್ಯಯನವನ್ನು ಕೈಗೊಂಡು ಐದು ರಾಜ್ಯಗಳಿಗೆ (ಚತ್ತೀಸ್ ಘಡ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಾಖಂಡ) ಸೇರಿದ 44 ಜಿಲ್ಲೆಗಳಲ್ಲಿನ 1137 ಸಾರ್ವಜನಿಕ ಶಾಲೆಗಳ 16,067 ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಮರೆಯುವಿಕೆ/ಹಿನ್ನೆಡೆ ಸ್ವರೂಪದ ಕಲಿಕಾನಷ್ಟವನ್ನು ಪರಿಶೀಲಿಸಿತು. 2ರಿಂದ 6ನೇ ತರಗತಿಯ ಭಾಷೆ ಮತ್ತು ಗಣಿತ ವಿಷಯಗಳ ನಾಲ್ಕು ನಿರ್ದಿಷ್ಟ ಸಾಮರ್ಥ್ಯಗಳ ಮೌಲ್ಯಮಾಪನದ ಮೇಲೆ ಈ ಅಧ್ಯಯನ ಕೇಂದ್ರೀಕೃತವಾಗಿತ್ತು. ಸಂಬಂಧಪಟ್ಟ ಶಿಕ್ಷಕರ ನೆರವಿನಿಂದ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಕಲಿಕಾ ನಷ್ಟದ ವ್ಯಾಪ್ತಿ ಮತ್ತು ಸ್ವರೂಪಗಳು ಎಷ್ಟು ಗಂಭೀರವಾಗಿದ್ದವೆಂದರೆ ಅವು ಎಲ್ಲ ಹಂತಗಳಲ್ಲೂ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕೆಂದು ಒತ್ತಾಯಿಸುತ್ತವೆ. ಎಲ್ಲ ತರಗತಿಗಳಲ್ಲಿ ಸರಾಸರಿ 92% ಮಕ್ಕಳು ಹಿಂದಿನ ತರಗತಿಯ ಒಂದಾದರೂ ನಿರ್ದಿಷ್ಟ ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಎಲ್ಲ ತರಗತಿಗಳಲ್ಲಿ ಸರಾಸರಿ 82% ಮಕ್ಕಳು ಹಿಂದಿನ ತರಗತಿಯ ಕನಿಷ್ಠ ಒಂದಾದರೂ ನಿರ್ದಿಷ್ಟ ಗಣಿತದ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ಇದರ ವಿವರಗಳನ್ನು ಈ ಅಧ್ಯಯನದ ವರದಿಯಲ್ಲಿ ನೀಡಲಾಗಿದೆ. ಮಕ್ಕಳು ತಾವು ಕಳೆದುಕೊಂಡಿರುವ ಸಾಮರ್ಥ್ಯಗಳನ್ನು ಮತ್ತೆ ಗಳಿಸಿಕೊಳ್ಳುವಂತೆ ಮಾಡಲು ಶಾಲೆಗಳು ಆರಂಭವಾದಾಗ ಬ್ರಿಡ್ಜ್ ಕೋರ್ಸ್ ವಿಸ್ತರಿತ ಅವಧಿಯ ಬೋಧನಾ ಕಲಿಕೆ ಸಾಮಗ್ರಿಗಳನ್ನು ಒದಗಿರುವುದು ಅಗತ್ಯವಾಗಿದೆ.

Item Type: Monograph (Other)
Discipline: Education
Programme: Foundation Publications > Field Reports
Title(English): The loss of learning for children during the covid-19 pandemic
Creators(English): Research Group | Azim Premji Foundation
Publisher: Azim Premji Foundation
URI: http://anuvadasampada.azimpremjiuniversity.edu.in/id/eprint/2595
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.