Advanced Search
Welcome to Anuvada Sampada Repository

ಸಮನ್ವಯ - ಶಿಕ್ಷಣದತ್ತ ಆಗಿರುವ ಪ್ರಯತ್ನಗಳಲ್ಲಿ ಅವಕಾಶಗಳು ಹಾಗೂ ಸವಾಲುಗಳು: ಭಾರತದಿಂದ ಕೆಲವು ಚಿಂತನೆಗಳು

ಸಿಂಗಲ, ನಿಧಿ (2019) ಸಮನ್ವಯ - ಶಿಕ್ಷಣದತ್ತ ಆಗಿರುವ ಪ್ರಯತ್ನಗಳಲ್ಲಿ ಅವಕಾಶಗಳು ಹಾಗೂ ಸವಾಲುಗಳು: ಭಾರತದಿಂದ ಕೆಲವು ಚಿಂತನೆಗಳು ಇಂಟರ್ನ್ಯಾಷನಲ್ ಜರ್ನಲ್ ಆಫ್ ಇನ್ಕ್ಲ್ಯೂಸಿವ್ ಎಜುಕೇಶನ್. pp. 827-840.

[img] Fulltext Document
Challenges and opportunities in efforts towards inclusive education.pdf

Download (361kB)

Introduction

‘ಸಲಮಾನ್ಕ ಹೇಳಿಕೆ’ಯು ಅತ್ಯಂತ ಮೂಲೆಗುಂಪಾದ ಸಮುದಾಯಗಳ ಶಿಕ್ಷಣದ ಕುರಿತಾಗಿ, ವಿಶ್ವದಾದ್ಯಂತ ಎಲ್ಲ ಜನರ ಗಮನಸೆಳೆಯಲು ಪ್ರಬಲವಾದ ಇಂಬನ್ನು ನೀಡಿದೆ. ಭಾರತದಲ್ಲಿ,ವಿಕಲಚೇತನ ಮಕ್ಕಳಿಗೆ ಶಾಲೆಯ ಶಿಕ್ಷಣವನ್ನು ಕಲ್ಪಿಸುವಲ್ಲಿ ನಿರ್ದಿಷ್ಟವಾದ ಹಾಗೂ ಪ್ರಮುಖವಾದ ಪ್ರಭಾವವನ್ನು ಬೀರಿದೆ. ಈ ಲೇಖನವು ರಾಷ್ಟ್ರೀಯ ನೀತಿಗಳು ಹಾಗೂ ಕಾರ್ಯಕ್ರಮಗಳಲ್ಲಾಗಿರುವ ಮುಖ್ಯ ಬೆಳವಣಿಗೆಗಳನ್ನು ವಿಮರ್ಶಿಸಿ, ಅವುಗಳು ತರಗತಿಯ ಮಟ್ಟದಲ್ಲಿ ಆಗಿರುವ ಬದಲಾವಣೆಗಳನ್ನು ಹೇಗೆ ರೂಪಿಸಿವೆ ಎಂಬುದನ್ನು ವಿಶ್ಲೇಷಿಸುತ್ತದೆ. ನ್ಯಾನ್ಸಿ ಫ್ರೇಸರ್ ಅವರ ನ್ಯಾಯದ ಪರಿಕಲ್ಪನೆಯನ್ನು ಒಂದು ವಿಶ್ಲೇಷಣಾ ಸಾಧನವಾಗಿ ಬಳಸಿ, ಈ ಲೇಖನವು ಮರುಹಂಚಿಕೆ, ಮಾನ್ಯತೆ ಹಾಗೂ ಪ್ರಾತಿನಿಧ್ಯದ ವಿಚಾರಗಳ ಮೂಲಕ ಭಾರತದಲ್ಲಿ ಸಮನ್ವಯ ಶಿಕ್ಷಣವನ್ನು ರೂಪಿಸುವಲ್ಲಿ ಆಗಿರುವ ಪ್ರಯತ್ನಗಳನ್ನು ವಿವರಿಸುತ್ತದೆ. ಕಳೆದ ಎರಡು ದಶÀಕಗಳಲ್ಲಿ, ವಿಕಲಚೇತನ ಮಕ್ಕಳ ಶಾಲಾ ದಾಖಲಾತಿಯ ಸಂಖ್ಯೆಯಲ್ಲಿ ಮಹತ್ವಪೂರ್ಣ ಹೆಚ್ಚಳ ಕಂಡುಬಂದಿದೆ. ಇದಕ್ಕೆ ಚಾಲನೆ ನೀಡುವಂತೆ, ಸಕಾರಾತ್ಮಕ ಕಾನೂನು ಹಾಗೂ ಅವರಿಗೆ ಅವಶ್ಯಕವಾದ ಪರಿಕರಗಳನ್ನು ಒದಗಿಸಲಾಗಿದೆ. ಆದರೆ, ವಿಕಲಚೇತನ ಮಕ್ಕಳ ಕಲಿಕಾ ಅನುಭವ ಹಾಗೂ ಬೋಧನೆಯ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ವಹಿಸಲಾಗಿಲ್ಲ. ಬದಲಿಗೆ, ಈಗಾಗಲೆ ಹಲವಾರು ಸವಾಲುಗಳನ್ನು ಹೊಂದಿರುವ ಮುಖ್ಯವಾಹಿನಿಗೆ ಈ ಮಕ್ಕಳನ್ನು ಸೇರಿಸುವಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಈ ವಿವಾದಾಂಶಗಳಿದ್ದರೂ ‘ಸಲಮಾನ್ಕ ಹೇಳಿಕೆ’ ಯಲ್ಲಿ ವ್ಯಕ್ತವಾಗಿರುವ, ಸಮನ್ವಯ ಶಿಕ್ಷಣದ ಕಾಣ್ಕೆಯು, ಅದರಲ್ಲೂ ಸ್ಥಳೀಯ ವಾಸ್ತವಗಳನ್ನಾಧರಿಸಿದ ಪ್ರಯತ್ನಗಳಲ್ಲಿ ಸಾಧ್ಯವಾಗುತ್ತದೆ ಎಂಬುದಕ್ಕೆ ಭಾರತವು ಒಂದು ಬಲವಾದ ಉದಾಹರಣೆಯಾಗಿದೆ.

Item Type: Article
Discipline: Inclusive Education - Introduction
Programme: Diploma Programmes > Diploma in Inclusive Education
Title(English): Challenges and opportunities in efforts towards inclusive education: reflections from India
Creators(English): Nidhi Singal
Publisher: Taylor and Francis
Journal or Publication Title(English): International journal of inclusive education
URI: http://anuvadasampada.azimpremjiuniversity.edu.in/id/eprint/4613
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.