ಪೂರ್ವಸಿದ್ಧತಾ ಹಂತದ ಗಣಿತದಲ್ಲಿ ಸಂಕಲನಾತ್ಮಕ ಮೌಲ್ಯಾಂಕನ: ಒಂದು ದೃಷ್ಟಿಕೋನ
ಟಿ, ಅನುಷಾ and ಕೃಷ್ಣನ್, ರೇಷ್ಮಾ (2026) ಪೂರ್ವಸಿದ್ಧತಾ ಹಂತದ ಗಣಿತದಲ್ಲಿ ಸಂಕಲನಾತ್ಮಕ ಮೌಲ್ಯಾಂಕನ: ಒಂದು ದೃಷ್ಟಿಕೋನ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಅಟ್ ರೈಟ್ ಆಂಗಲ್ಸ್ (24). pp. 7-15.
|
Fulltext Document
A Lens to view Summative Assesment in Preparatory Stage Mathematics.pdf Available under License Creative Commons Attribution Non-commercial Share Alike. Download (6MB) |
Introduction
ಈ ಲೇಖನವು ‘ಪೂರ್ವಸಿದ್ಧತಾ ಹಂತದಲ್ಲಿ ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಅರ್ಥಪೂರ್ಣವಾಗಿಸುವುದು’ ಲೇಖನದ ಮುಂದುವರಿದ ಭಾಗವಾಗಿದೆ. ಪೂರ್ವಸಿದ್ಧತಾ ಹಂತದ ಶಿಕ್ಷಕರು ಮಕ್ಕಳ ವಯೋಮಾನಕ್ಕನುಗುಣವಾದ, ಕಡಿಮೆ ಒತ್ತಡದ ಮತ್ತು ಮಕ್ಕಳ ಬೆಳವಣಿಗೆಯ ಅಗತ್ಯಕ್ಕನುಗುಣವಾಗಿ ಅರ್ಥಪೂರ್ಣವಾದ ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಹೇಗೆ ವಿನ್ಯಾಸಗೊಳಿಸಬಹುದು ಎಂಬುದರ ಕುರಿತು ಇದು ಬೆಳಕು ಚೆಲ್ಲುತ್ತದೆ. ಇದು ಮೌಲ್ಯಾಂಕನಕ್ಕಾಗಿ ಕೆಲವು ಸಾಧನಗಳನ್ನು ಸೂಚಿಸುವುದರೊಂದಿಗೆ ಮೂರು ಮಾದರಿ ವಿಧಾನಗಳನ್ನು ಪ್ರಸ್ತುತಪಡಿಸುತ್ತದೆ. ಮೊದಲನೇ ವಿಧಾನವು ಅಳತೆಯ ಕುರಿತಾದ ಒಂದು ಅನ್ವೇಷಣಾ ಕಾರ್ಯವಾಗಿದ್ದು, ಇದನ್ನು ರೇಟಿಂಗ್ ಸ್ಕೇಲ್ ಬಳಸಿ ಮೌಲ್ಯಾಂಕನ ಮಾಡಬಹುದು. ಎರಡನೇ ವಿಧಾನವು ಒಂದು ಯೋಜನಾ ಕಾರ್ಯವಾಗಿದ್ದು (project work), ಇದು ಸ್ಪೇಷಿಯಲ್ ರೀಸನಿಂಗ್ ಅನ್ನು ಕಲೆಯೊಂದಿಗೆ ಸಂಯೋಜಿಸುತ್ತದೆ. ಇದನ್ನು ರೂಬ್ರಿಕ್ಗಳನ್ನು ಬಳಸಿ ಮೌಲ್ಯಾಂಕನ ಮಾಡಲಾಗುತ್ತದೆ. ಮೂರನೇ ವಿಧಾನವು ಒಂದು ರೀತಿಯ ಪ್ರಾತ್ಯಕ್ಷಿಕೆ ಚಟುವಟಿಕೆಯಾಗಿದ್ದು, ಜ್ಯಾಮಿತೀಯ ಚಿಂತನೆಯನ್ನು ಸ್ವಯಂ-ಮೌಲ್ಯಾಂಕನ ಚೆಕ್ಲಿಸ್ಟ್ ಮೂಲಕ ಮೌಲ್ಯಾಂಕನ ಮಾಡುತ್ತದೆ. ಸಂಕಲನಾತ್ಮಕ ಮೌಲ್ಯಾಂಕನಗಳನ್ನು ಹೆಚ್ಚು ಅರ್ಥಪೂರ್ಣ ಮತ್ತು ಸಮಗ್ರವಾಗಿಸಲು ಈ ವಿಧಾನಗಳು ಲಿಖಿತ ಪರೀಕ್ಷೆಗಳಿಗೆ ಪೂರಕವಾಗಿ ಕೆಲಸ ಮಾಡಬಲ್ಲವು. ಈ ವಿಧಾನವು ಮಕ್ಕಳಿಗೆ ಆನಂದದಾಯಕ ಮತ್ತು ಒತ್ತಡರಹಿತ ಕಲಿಕೆಯ ವಾತಾವರಣವನ್ನೂ ಒದಗಿಸುತ್ತದೆ.
| Item Type: | Article |
|---|---|
| Discipline: | Maths Education |
| Programme: | University Publications > At Right Angles |
| Title(English): | A Lens to view Summative Assesment in Preparatory Stage Mathematics |
| Creators(English): | Anusha T, Reshma Krishnan |
| Publisher: | Azim Premji University |
| Journal or Publication Title(English): | Azim Premji University At Right Angles |
| Contributors: | Translator: Sharada Raghavendra; Reviewer: Madhukara S Putty |
| Related URLs: | |
| URI: | http://anuvadasampada.azimpremjiuniversity.edu.in/id/eprint/5890 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.
