Advanced Search
Welcome to Anuvada Sampada Repository

ತರಗತಿಯ ಸಂಪನ್ಮೂಲವಾಗಿ ಬಹುಭಾಷಿಕತೆ

ಮಿಶ್ರ, ಸುನೀತಾ (2022) ತರಗತಿಯ ಸಂಪನ್ಮೂಲವಾಗಿ ಬಹುಭಾಷಿಕತೆ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ತರಗತಿಯ ಸಂಪನ್ಮೂಲವಾಗಿ ಬಹುಭಾಷಿಕತೆ.pdf

Download (838kB)

Introduction

ಶಿಕ್ಷಕರು ಬಹುಭಾಷಿಕತೆಯನ್ನು ಸಂಪನ್ಮೂಲವಾಗಿ ಹೇಗೆ ಬಳಸುತ್ತಾರೆ ಎಂಬುದನ್ನು ತೋರಿಸಲು ನಾಲ್ಕು ಪ್ರಕರಣಗಳನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ. ಮೊದಲನೆಯದಾಗಿ, ಶಿಕ್ಷಕಿ ತನ್ನ ಬೋಧನೆಯಲ್ಲಿ ಬಂಗಾಳಿ ಮತ್ತು ಹಿಂದಿಯ ನಾಲ್ಕು ರೂಪಾಂತರಗಳನ್ನು ಬಳಸುತ್ತಾರೆ. ಉದಾಹರಣೆಗೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಸುವ ವಿವಿಧ ಇಂಧನಗಳ ಹೆಸರನ್ನು ತಮ್ಮ ಭಾಷೆಗಳಲ್ಲಿ ನೀಡಲು ವಿದ್ಯಾರ್ಥಿಗಳನ್ನು ಅವರು ಪ್ರೋತ್ಸಾಹಿಸುತ್ತಾರೆ. ಎರಡನೆಯ ಸಂದರ್ಭದಲ್ಲಿ, ಕೆಲವು ಹುಡುಗರು ತಮ್ಮ ತ್ರಾಸದಾಯಕ ವರ್ತನೆಗೆ ಹೆಸರುವಾಸಿಯಾಗಿದ್ದರು. ಶಿಕ್ಷಕರು ಹುಡುಗರೊಂದಿಗೆ ತಮ್ಮದೇ ಭಾಷೆಯಲ್ಲಿ ಸಂವಹನ ನಡಸಿ ಅವರ ಅಡ್ಡಿಪಡಿಸುವ ನಡವಳಿಕೆಯನ್ನು ಕಡಮೆ ಮಾಡಿದರು. ಮೂರನೆಯ ಪ್ರಕರಣದಲ್ಲಿ, ಶಿಕ್ಷಕರು ವಲಸೆ ಬಂದ ಹುಡುಗಿಯನ್ನು ತನ್ನ ಸ್ವಂತ ಭಾಷೆಯಲ್ಲಿ ಮನೆಯ ಭಾಗಗಳಿಗೆ ಪದಗಳನ್ನು ನೀಡುವಂತೆ ಪ್ರೋತ್ಸಾಹಿಸುತ್ತಾರೆ ಮತ್ತು ಈ ಪದಗಳನ್ನು ಕಪ್ಪು ಹಲಗೆ ಮೇಲೆ ಬರೆಯುತ್ತಾರೆ. ನಾಲ್ಕನೆಯ ಸಂದರ್ಭದಲ್ಲಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮದೇ ಭಾಷೆಯಲ್ಲಿ ಕಥೆಗಳನ್ನು ಹೇಳಲು ಹೇಳುತ್ತಾರೆ. ಅವರು ಪದಗಳು ಮತ್ತು ವಾಕ್ಯಗಳನ್ನು ಭಾಷೆಗಳ ನಡುವೆ ಹೋಲಿಸುತ್ತಾರೆ. ಅವರು ವಿದ್ಯಾರ್ಥಿಗಳ ಬರವಣಿಗೆಗಾಗಿ ಇತರ ಉಪಭಾಷೆಗಳಲ್ಲಿ ಚಲನಚಿತ್ರ ಹಾಡುಗಳು ಮತ್ತು ಕವಿತೆಗಳನ್ನು ಬಳಸಿದರು. ಪ್ರಕರಣಗಳಲ್ಲಿ ನಡೆಯುವ ಸಾಮಾನ್ಯ ಎಳೆಯನ್ನು ಸೆಳೆಯುವ ಮೂಲಕ ಅಧ್ಯಯನವು ಕೊನೆಗೊಳ್ಳುತ್ತದೆ. ಬಹುಭಾಷಾವಾದವನ್ನು ತರಗತಿಯ ಸಂಪನ್ಮೂಲವಾಗಿ ಬಳಸುವುದು ಸಾಂಸ್ಕೃತಿಕ ಬಂಡವಾಳವನ್ನು ಕಾಪಾಡಲು ಮತ್ತು ಭಾಷಾ ಜನಾಂಗೀಯ ಹತ್ಯೆಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅದು ಸೂಚಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Multilingualism as a classroom resource
Publisher: Azim Premji University
Journal or Publication Title(English): Language and Language Teaching
Contributors: Translator: Ramakrishna bhat; Reviewer: Devaki Lakshminarayan; Copyeditor: Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/765
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.