Advanced Search
Welcome to Anuvada Sampada Repository

ಬ್ಯಾಸಲ್ ಬರ್ನ್‌ಸ್ಟೈನ್

ಸೇಡೋವ್ನಿಕ್, ಆಲನ್ ಆರ್. (2001) ಬ್ಯಾಸಲ್ ಬರ್ನ್‌ಸ್ಟೈನ್ ಪ್ರಾಸ್ಪೆಕ್ಟ್ಸ್: ಶಿಕ್ಷಣದ ತ್ರೈಮಾಸಿಕ ವಿಮರ್ಶೆ, 31 (4). pp. 687-703.

[img] Fulltext Document
Basil Bernstein.pdf

Download (590kB)

Introduction

ಬೆಸಿಲ್ ಬರ್ನ್‌ಸ್ಟೈನ್ ಶಿಕ್ಷಣ ಮತ್ತು ಜ್ಞಾನದ ಸಮಾಜಶಾಸ್ತ್ರದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ. ಶಾಲಾ ಶಿಕ್ಷಣ, ಭಾಷೆ ಮತ್ತು ಕುಟುಂಬದ ಕುರಿತಾದ ಅವರ ಕೃತಿಗಳು ಶಿಕ್ಷಣದಲ್ಲಿನ ವಿಭಿನ್ನ ಸಾಧನೆಗಳ ತಿಳುವಳಿಕೆಗೆ ಅಡಿಪಾಯವಾಗಿದೆ. ಆದಾಗ್ಯೂ, ಜ್ಞಾನ ಉತ್ಪಾದನೆ, ಶಿಕ್ಷಣ ಮತ್ತು ಸಾಮಾಜಿಕ ರಚನೆಯಲ್ಲಿನ ಸಮಕಾಲೀನ ಸಮಸ್ಯೆಗಳ ತಿಳುವಳಿಕೆಯಲ್ಲಿ, ಬರ್ನ್‌ಸ್ಟೈನ್‌ರ ವಿಚಾರಗಳು ತುಲನಾತ್ಮಕವಾಗಿ ಸೀಮಿತವಾದುದಾಗಿದೆ. ಇದಕ್ಕೆ ಕಾರಣ -ಕೆಲವು ಬರಹಗಾರರ ಪ್ರಕಾರ- ಬರ್ನ್‌ಸ್ಟೈನ್‌ ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಅಥವಾ ಜಟಿಲವಾದುದು ಮತ್ತು ಪ್ರಾಯೋಗಿಕವಲ್ಲದ್ದು ಎಂದು ಟೀಕಿಸಲಾಗಿದೆ. ಬರ್ನ್‌ಸ್ಟೈನ್ ಸ್ವತಃ ಈ ತಪ್ಪು ತಿಳುವಳಿಕೆಯನ್ನು ಒಪ್ಪಿಕೊಳ್ಳುತ್ತಾರೆ. ಆದ್ದರಿಂದ, ಇದು ಅವರ ಪರಿಕಲ್ಪನೆಗಳನ್ನು ಪ್ರಾಯಶಃ ಅವರ ತಾತ್ಕಾಲಿಕತೆ ಮತ್ತು ಕಡಿಮೆ ಖಚಿತತೆಯ ದೃಷ್ಟಿಕೋನದಿಂದ ಸಮೀಪಿಸಲು ಸಹಾಯ ಮಾಡುತ್ತದೆ ಮತ್ತು ಅವರ ಮಾದರಿಗಳನ್ನು ನೋಡಲು ಸಹಾಯ ಮಾಡುತ್ತದೆ - ನಿರಂತರವಾಗಿ ವಿಕಸನಗೊಳ್ಳುತ್ತಿರುವ ಸೈದ್ಧಾಂತಿಕ ಸಾಧನಗಳು ಸಾಮಾಜಿಕ ವಾಸ್ತವತೆಯ ಕೆಲವು ಅಂಶಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಬಹುದು; ಮೂಲಭೂತ ಪ್ರಶ್ನೆಗಳಿಗೆ ನಮ್ಮ ಸಮಾಜಶಾಸ್ತ್ರೀಯ ಕಲ್ಪನೆಯನ್ನು ಮಾರ್ಗದರ್ಶನ ಮಾಡಲು; ಸಾಮಾಜಿಕ ಸಂಸ್ಥೆಗಳ ಆಧಾರವಾಗಿರುವ ರಚನೆಗಳು ಮತ್ತು ತತ್ವಗಳು ಸಾಮೂಹಿಕ ಅನುಭವವನ್ನು ಹೇಗೆ ರೂಪಿಸುತ್ತವೆ ಎಂಬುದು ಅವುಗಳಲ್ಲಿ ಒಂದು. ಈ ಲೇಖನವು ಬರ್ನ್‌ಸ್ಟೈನ್‌ರ ಸಾಮಾಜಿಕ ಮತ್ತು ಶೈಕ್ಷಣಿಕ ಸಿದ್ಧಾಂತಗಳು ಮತ್ತು ಕೊಡುಗೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡುತ್ತದೆ. ಇದು ಬರ್ನ್‌ಸ್ಟೈನ್‌ರ ಸಣ್ಣ ಜೀವನಚರಿತ್ರೆಯನ್ನೂ ಒಳಗೊಂಡಿದೆ. ಜ್ಞಾನ ಮತ್ತು ನೈತಿಕ ಕ್ರಮದ ಸಾಮಾಜಿಕ ರಚನೆಯ ಅವರ ಸಿದ್ಧಾಂತಗಳು ಮತ್ತು ಅವರ ಮೇಲೆ ಪ್ರಭಾವ ಬೀರಿದ ಚಿಂತಕರ ಕುರಿತಾದ ವಿಶ್ಲೇಷಣೆಯೂ ಇದರಲ್ಲಿದೆ."

Item Type: Article
Discipline: Sociology of Education
Programme: Postgraduate Programmes > MA in Education
Title(English): Basil Bernstein
Creators(English): Alan Sadovnik
Publisher: International Bureau of Education
Journal or Publication Title(English): Prospects: The Quarterly Review of Education
Contributors: Prajna LS, MG Hegde and T.N. Vasudevamurthy
URI: http://anuvadasampada.azimpremjiuniversity.edu.in/id/eprint/4424
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.