Advanced Search
Welcome to Anuvada Sampada Repository

ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ

ಗಿರಿಧರ್, ಎಸ್. (2021) ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 57-64. ISBN 978-93-89308-81-5

[img] Fulltext Document
ಪಠ್ಯಕ್ರಮ ಒತ್ತಟ್ಟಿಗಿರಲಿ! ಮಕ್ಕಳಿಗೆ ನಾವು ಮೂಲಭೂತ ವಿಷಯಗಳನ್ನು ಕಲಿಸೋಣ.pdf

Download (81kB)

Introduction

ತಮ್ಮ ಅನಾರೋಗ್ಯವನ್ನು ಕೂಡ ಲೆಕ್ಕಿಸದೆ ಕೇವಲ ಮಕ್ಕಳ ಬಗ್ಗೆಯೇ ಚಿಂತಿಸುತ್ತಾ ಅವರ ಏಳಿಗೆಗೆ ಶ್ರಮಿಸುತ್ತಾ ಇರುವ ಶ್ರೀ ರಮೇಶ್ ಚಂದ್ರ ಪಾಲ್ ಅವರ ಸಾಧನೆಯ ಬಗ್ಗೆ ಈ ಲೇಖನ ಚಿತ್ರಿಸುತ್ತದೆ. ಅಕ್ಷರ ಜ್ಞಾನವಿಲ್ಲದ ಸಮುದಾಯಕ್ಕೆ ಸೇರಿದ ಈ ಶಾಲೆಯ ಮಕ್ಕಳು ಉತ್ಸಾಹದಿಂದ ಕಲಿಯಲು ರಮೇಶ್ ಚಂದ್ರ ಪಾಲ್ ಅವರ ಪರಿಶ್ರಮವೇ ಕಾರಣ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಮೀಠನ್ ನ ಸರ್ಕಾರೀ ಉತ್ಕೃಷ್ಟ ಹಿರಿಯ ಪ್ರಾಥಮಿಕ ಶಾಲೆಗೆ ಇವರು ಮೊದಲಿಗೆ ಬಂದು ಸೇರಿಕೊಂಡಾಗ ಬಹಳ ಸಮಸ್ಯೆಗಳನ್ನೆದುರಿಸಬೇಕಾಯಿತು. ಮಾಡಿದ ಪಾಠವನ್ನು ಅರ್ಥ ಮಾಡಿಕೊಳ್ಳಲೂ ಆಗದ ಪರಿಸ್ಥಿತಿಯಲ್ಲಿ ಮಕ್ಕಳಿದ್ದರು. ಅವರ ಅನಾರೋಗ್ಯವೂ ಜೊತೆಗೆ ಸೇರಿಕೊಂಡಿತ್ತು. ಇದ್ಯಾವುದನ್ನೂ ಲೆಕ್ಕಿಸದೆ, ಪಾಠಗಳನ್ನು ಮುಗಿಸಿಬಿಟ್ಟರೆ ಆಗದು, ಮಕ್ಕಳಿಗೆ ಮೂಲಭೂತ ಪರಿಕಲ್ಪನೆಗಳು ಅರ್ಥವಾಗಬೇಕು ಎಂದು ನಿರ್ಧರಿಸಿದ ರಮೇಶ್ ಚಂದ್ರ ಅವರು ಅದರಂತೆಯೇ ನಡೆದುಕೊಂಡು ಮಕ್ಕಳ ಕಲಿಕೆಯ ಗುಣಮಟ್ಟ, ಹಾಜರಿ ಸಂಖ್ಯೆ ಎರಡನ್ನೂ ಹೆಚ್ಚಿಸಲು ಕಾರಣವಾದರು. ಈ ಲೇಖನ ಅವರ ವಿಭಿನ್ನ ಬೋಧನಾ ಶೈಲಿ, ಮೂಲಭೂತ ಪರಿಕಲ್ಪನೆಗಳನ್ನು ಬೋಧಿಸಲು ಅವರು ಕೊಡುವ ಪ್ರಾಮುಖ್ಯತೆ ಹಾಗೂ ಶಾಲೆಯ ಒಳಿತಿಗಾಗಿ ಅವರು ಪಡುತ್ತಿರುವ ಸತತ ಪರಿಶ್ರಮದ ಬಗ್ಗೆ ವಿವರಿಸುತ್ತದೆ.

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3311
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.