Advanced Search
Welcome to Anuvada Sampada Repository

ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ

ಗಿರಿಧರ್, ಎಸ್. (2021) ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 177-182. ISBN 978-93-89308-81-5

[img] Fulltext Document
ಭಿವಂಡಿಯ ವಿದ್ಯುತ್‌ ಮಗ್ಗದಲ್ಲಿ ಕಳೆದುಹೋಗಲಿದ್ದ, ಬೆರಗು ಮೂಡಿಸುವ ಶಿಕ್ಷಕ.pdf

Download (76kB)

Introduction

ಭಿವಂಡಿಯ ವಿದ್ಯುತ್‌ ಮಗ್ಗಗಳಲ್ಲಿ ಹಲವಾರು ವರ್ಷ ಕೆಲಸ ನಿರ್ವಹಿಸಿದ ಶಂಕರ್‌ ಎಂಬುವವರು ಆಕಸ್ಮಿಕವೆಂಬಂತೆ ಶಿಕ್ಷಕ ವೃತ್ತಿಯಲ್ಲಿ ತೊಡಗಿ, ಯಶಸ್ವಿ ಶಿಕ್ಷಕರೆನಿಸಿದ ವೃತ್ತಾಂತವನ್ನು ಇಲ್ಲಿ ವಿವರಿಸಲಾಗಿದೆ. ಕೋಟಿಯಫಲಿಯಲ್ಲಿನ ಹೊಸದಾಗಿ ಆರಂಭಗೊಂಡ ಶಾಲೆಯಲ್ಲಿ ಏಕೈಕ ಶಿಕ್ಷಕರಾಗಿ ನೇಮಕಗೊಳ್ಳುವ ಇವರು, ಶಾಲೆಯ ಸರ್ವಾಂಗೀಣ ಯಶಸ್ಸಿಗೆ ಕಂಕಣಬದ್ಧರಾಗಿ ನಿಲ್ಲುತ್ತಾರೆ. ಗಿರಾಸಿಯಾ ಬುಡಕಟ್ಟಿಗೆ ಸೇರಿದ ಕೋಟಿಯಫಲಿಯ ರೈತ ಸಮುದಾಯ, ಅನಕ್ಷರಸ್ಥರಷ್ಟೇ ಅಲ್ಲದೆ, ಮಕ್ಕಳ ಕನಿಷ್ಠ ಅಗತ್ಯಗಳನ್ನು ಪೂರೈಸಲಾಗದ ಕಡು ಬಡವರು. ದಾನಿಗಳನ್ನು ಸಂಪರ್ಕಿಸುವ ಮೂಲಕ ಮಕ್ಕಳ ಅವ‍ಶ್ಯಕತೆಗಳ ಬಗ್ಗೆ ಶಂಕರ್‌ ಕಾಳಜಿ ವಹಿಸುತ್ತಾರೆ. ಶಾಲೆಯಲ್ಲಿನ ಇವರ ಉಪಕ್ರಮಗಳು ಸಮುದಾಯದ ಗಮನಸೆಳೆದು, ಪೋಷಕರಲ್ಲಿ ವಿಶ್ವಾಸವನ್ನು ಮೂಡಿಸುತ್ತವೆ. ಸಹೋದ್ಯೋಗಿ ಕಮಲೇಶ್‌ರವರ ಸಹಯೋಗದಿಂದಾಗಿ, ಮಕ್ಕಳಿಗೆ ಗುಣಮಟ್ಟದ ಕಲಿಕೆಯು ಲಭ್ಯವಾಗುತ್ತದೆ. ಪ್ರತಿಯೊಂದು ಮಗುವಿನ ಕಲಿಕೆಯ ಮಟ್ಟ ಹಾಗೂ ಸಮಸ್ಯೆಗಳ ದಾಖಲಾತಿಗಳನ್ನು ಸಹ ಇವರು ನಿರ್ವಹಿಸುತ್ತಾರೆ. ಶಾಲೆಯ ಸರ್ವತೋಮುಖ ಬೆಳವಣಿಗೆಯ ಹಿನ್ನೆಲೆಯಲ್ಲಿ ಇವರ ಅಪಾರ ಕರ್ತವ್ಯನಿಷ್ಠೆಯು ಅದ್ವಿತೀಯವಾದುದು..

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3334
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.