Advanced Search
Welcome to Anuvada Sampada Repository

ಮಕ್ಕಳ ಕಲಿಕೆ ಮತ್ತು ಸಾಮಾಜಿಕ ಸಂದರ್ಭ

ಸಾಹ, ಸುನಿಲ್‌ (2021) ಮಕ್ಕಳ ಕಲಿಕೆ ಮತ್ತು ಸಾಮಾಜಿಕ ಸಂದರ್ಭ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (35).

[img] Fulltext Document
Children's Learning Social Context.pdf

Download (1MB)

Introduction

ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ಇರುವ ಸಾಮಾಜಿಕ ನಂಬಿಕೆಗಳ ಬಗ್ಗೆ ಈ ಲೇಖನವು ಚರ್ಚಿಸುತ್ತದೆ. ಮಕ್ಕಳ ಕಲಿಕೆಯ ಸಾಮರ್ಥ್ಯವನ್ನು ಅವರ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಿನ್ನೆಲೆಗಳ ಆಧಾರದಲ್ಲಿ ನಿರ್ಧರಿಸಿದರೆ ನಮ್ಮ ಪ್ರಯತ್ನಗಳು ಕುಗ್ಗುತ್ತವೆ ಎನ್ನುವ ಅಂಶವನ್ನು ಲೇಖಕರು ಹೇಳಿದ್ದಾರೆ. ನಾವೆಲ್ಲರೂ, ವಿಶೇಷವಾಗಿ ಶಿಕ್ಷಕರು, ಮಕ್ಕಳ ಕಲಿಕಾ ಸಂಬಂಧಿಯಾದ ತಮ್ಮ ದೃಷ್ಟಿಕೋನಗಳನ್ನು ರೂಪಿಸಿಕೊಳ್ಳುವಾಗ ಮಕ್ಕಳ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಯ ಆಧಾರದಲ್ಲಿ ಸಾಮರ್ಥ್ಯ ಅಥವಾ ಅಸಾಮರ್ಥ್ಯಗಳನ್ನು ಪರಿಗಣಿಸುವುದನ್ನು ಬಿಟ್ಟುಬಿಡಬೇಕೆಂದು ಲೇಖಕರು ಇಲ್ಲಿ ಒತ್ತಿಹೇಳುತ್ತಾರೆ. ಈ ಲೇಖನವು, ನಮ್ಮ ಪೂರ್ವಾಗ್ರಹಗಳು ಮತ್ತು ಕಾರ್ಯಗಳನ್ನು ಸಂವೇದನಾಪೂರ್ಣ ರೀತಿಯಲ್ಲಿ ಬದಲಿಸಿಕೊಳ್ಳಲು ಒತ್ತಾಯಿಸುತ್ತದಲ್ಲದೆ, ಈ ನಿಟ್ಟಿನಲ್ಲಿ ಹೊಸ ವಿಧಾನಗಳನ್ನೂ ಸೂಚಿಸುತ್ತದೆ. ಮಕ್ಕಳು ಶಾಲೆಯನ್ನು ತಮ್ಮದೇ ಎಂದು ಭಾವಿಸುವ ಹಾಗೆ ಏನನ್ನಾದರೂ ಮಾಡಬೇಕೆನ್ನುವ ಲೇಖಕರು, ಕೆಲವು ತರಗತಿಯ ಹೊರಗೆ ಕೈಗೆತ್ತಿಕೊಳ್ಳುವ ಪ್ರಕ್ರಿಯೆಯಾದರೂ, ಅವನ್ನು ತರಗತಿ ಕೊಠಡಿಯ ಭಾಗವನ್ನಾಗಿಸಬೇಕು ಎನ್ನುತ್ತಾರೆ. ಈ ವಿಚಾರದಲ್ಲಿ ಶಿಕ್ಷಕರ ಕಾರ್ಯವ್ಯಾಪ್ತಿ ದೊಡ್ಡದಾಗಿದ್ದರೂ, ಚಿಂತನಶೀಲ ಸಮಾಜದ ನಿರ್ಮಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆಯನ್ನು ಈ ಲೇಖನವು ಸಾರಿ ಹೇಳುತ್ತದೆ.

Item Type: Article
Discipline: Education
Programme: University Publications > Learning Curve
Title(English): Children's Learning Social Context
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/572
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.