Advanced Search
Welcome to Anuvada Sampada Repository

ಅಂಕಗಣಿತದಲ್ಲಿ ದೋಷಗಳ ವ್ಯಾಖ್ಯಾನ

ದಿವಾನ್, ಹೃದಯ್‌ ಕಾಂತ್‌ ಅಂಕಗಣಿತದಲ್ಲಿ ದೋಷಗಳ ವ್ಯಾಖ್ಯಾನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Interpretation of Errors in Arithmetic.pdf

Download (311kB)

Introduction

ದೋಷಗಳು ಕಲಿಕಾರ್ಥಿಯ ಮನಸ್ಸನ್ನು ತೋರಿಸುವ ಕಿಟಕಿಗಳು ಎನ್ನುವುದನ್ನು ಹೇಳುತ್ತಾ, ಮಕ್ಕಳು ಕೊಟ್ಟ ಪ್ರಶ್ನೆಯನ್ನು ಉತ್ತರಿಸುವಲ್ಲಿ ಯಾವ ರೀತಿಯ ಆಲೋಚನಾ ಕ್ರಮವನ್ನು ಅನುಸರಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಅವಶ್ಯಕ. ಇದು ಮಕ್ಕಳು ಯಾವ ರೀತಿ ಪರಿಕಲ್ಪನೆಯನ್ನು ಕಟ್ಟಿಕೊಂಡಿದ್ದಾರೆ ಎನ್ನುವುದಕ್ಕೆ ಬೆಳಕು ಚೆಲ್ಲುತ್ತದೆ ಎಂದು ಲೇಖಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೇವಲ ಉತ್ತರವನ್ನು ತರಿಸುವುದಕ್ಕಾಗಿ ಮಕ್ಕಳಿಗೆ ಯಾಂತ್ರಿಕ ಚಟುವಟಿಕೆ ಹಾಗೂ ಕ್ಷಿಪ್ರವಿಧಾನಗಳನ್ನು ಹೇಳಿಕೊಡುವುದರಿಂದ, ಮಕ್ಕಳು ಅತಿಯಾದ ಸಾಮಾನ್ಯೀಕರಣವನ್ನು ಮಾಡಿಕೊಂಡು ಆ ವಿಧಾನಗಳನ್ನು ಬೇರೆ ಸನ್ನಿವೇಶಗಳಲ್ಲಿ ತಪ್ಪು ತಪ್ಪಾಗಿ ಅನ್ವಯಿಸುತ್ತಾರೆ. ಇದೇ ಮಕ್ಕಳ ದೋಷಗಳಿಗೆ ಮೂಲ ಕಾರಣ ಎಂದು ಹಲವಾರು ಸನ್ನಿವೇಶದೊಂದಿಗೆ ಲೇಖಕರು ನಿದರ್ಶಿಸುತ್ತಾರೆ. ತರಗತಿಯ ಒಳಗೆ ಸಂಭಾಷಣೆಗಳನ್ನು ನಡೆಸುತ್ತಾ ಮಕ್ಕಳು ಪರಿಕಲ್ಪನೆಯನ್ನು ಅರ್ಥೈಸಿಕೊಂಡ ರೀತಿಯನ್ನು ವಿವರಿಸುವುದು ಹಾಗೆಯೇ ಅವುಗಳ ಮೇಲೆ ಇತರರ ಅಭಿಪ್ರಾಯಗಳನ್ನು ಕೇಳಿಕೊಳ್ಳುವುದಕ್ಕೆ ಹೆಚ್ಚು ಆಸ್ಪದ ಇರಬೇಕು ಎಂದು ಲೇಖಕರು ಆಗ್ರಹಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Interpretation Of Errors In Arithmetic
Publisher: Azim Premji University
Journal or Publication Title(English): Azim Premji University At Right Angles
Contributors: Translator: P A Vishwanath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/710
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.