Advanced Search
Welcome to Anuvada Sampada Repository

ಶಾಲೆಗಳನ್ನು ಪುನರಾರಂಭಿಸಿ- ಕಲಿಕಾ ನಷ್ಟವನ್ನು ಸರಿದೂಗಿಸಲು ಗಮನಹರಿಸಿ: ಶಿಕ್ಷಕರ ಸ್ಪಷ್ಟ ಅಪೇಕ್ಷೆ

ಸಂಶೋಧನಾ ಗುಂಪು | ಅಜೀಂ ಪ್ರೇಮ್‌ಜಿ ಫೌಂಡೇಶನ್, (2021) ಶಾಲೆಗಳನ್ನು ಪುನರಾರಂಭಿಸಿ- ಕಲಿಕಾ ನಷ್ಟವನ್ನು ಸರಿದೂಗಿಸಲು ಗಮನಹರಿಸಿ: ಶಿಕ್ಷಕರ ಸ್ಪಷ್ಟ ಅಪೇಕ್ಷೆ Other. Azim Premji Foundation. (Unpublished)

[img] Fulltext Document
kannada-versionopen-school-focus-recovering-lost-learning-clear-voice-teachers.pdf

Download (593kB)

Introduction

ಕೋವಿಡ್ 19ರ ಸಾಂಕ್ರಾಮಿಕ ರೋಗದ ಕಾರಣದಿಂದ ದೇಶದಾದ್ಯಂತ ಮಾರ್ಚ್ 2020ರಿಂದ ಸುಮಾರು 17 ತಿಂಗಳುಗಳ ಕಾಲ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿತ್ತು. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳನ್ನು ಪುನರಾಂಭಿಸಬೇಕೆಂದು ಶಿಕ್ಷಕರು ಮತ್ತು ತಜ್ಞರು ಶಿಫಾರಸ್ಸು ಮಾಡಿದ್ದರಿಂದ, ಪರಿಸ್ಥಿತಿಯನ್ನು ಪರಿಶೀಲಿಸಲು ಅಜೀಂ ಪ್ರೇಮ್ ಜಿ ಫೌಂಡೇಷನ್ 2021ರ ಆಗಸ್ಟ್ ತಿಂಗಳಿನಲ್ಲಿ 5 ರಾಜ್ಯಗಳ 18 ಜಿಲ್ಲೆಗಳಲ್ಲಿ ನಡೆಸಿದ ಕ್ಷೇತ್ರ ಅಧ್ಯಯನದಲ್ಲಿ ಶಿಕ್ಷಕರು ನೀಡಿದ ಅಭಿಪ್ರಾಯಗಳ ಸಾರಾಂಶವನ್ನು ಇಲ್ಲಿ ಕೊಡಲಾಗಿದೆ. ಮುಖಾಮುಖಿ ಒಡನಾಟವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಮಕ್ಕಳಿಗೆ ವಿವಿಧ ವಿಧಾನಗಳ ಮೂಲಕ ಸಂವಹನ ನಡೆಸಿದ್ದರೂ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಲಿಕಾ ನಷ್ಟವಾಗಿರುವುದರಿಂದ ಶಾಲೆಗಳನ್ನು ಪುನರಾರಂಭ ಮಾಡಿದಾಗ ಬುನಾದಿ ಸಾಮರ್ಥ್ಯಗಳ ಮೌಲ್ಯಮಾಪನ ಮಾಡಬೇಕು. ಮಕ್ಕಳ ಸಮಾಜೋ-ಭಾವನಾತ್ಮಕ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ರೀತಿಯಲ್ಲಿ ಬೋಧನೆ ಮತ್ತು ಕಲಿಕಾ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಶಿಕ್ಷಕರ ಮೇಲಧಿಕಾರಿಗಳು ಬೆಂಬಲ ನೀಡಬೇಕು. ಶಾಲೆ ಸ್ಥಗಿತಗೊಂಡ ವೇಳೆ ಮಕ್ಕಳು ಕಲಿತಿದ್ದನ್ನು ಮರೆತುಬಿಟ್ಟಿದ್ದಾರೆ. ಅವರಿಗೆ ಏನನ್ನು ಹೇಗೆ ಕಲಿಸಬೇಕು ಎಂದು ನಿರ್ಧರಿಸಲು ಹಿಂದಿನ ತರಗತಿಗಳಲ್ಲಿ ಮಕ್ಕಳು ಗಳಿಸಿದ ಸಾಮರ್ಥ್ಯದ ಮೌಲ್ಯಮಾಪನ ಮಾಡಬೇಕು. ಪಠ್ಯಕ್ರಮವನ್ನು ಪುನರ್ ವಿನ್ಯಾಸಗೊಳಿಸಬೇಕು ಮತ್ತು ಬದಲಾವಣೆ ತರಬೇಕು. ಬೋಧನಾ ಕಲಿಕೆ ಪ್ರಕ್ರಿಯೆ ಮತ್ತು ಸಾಮಗ್ರಿಗಳನ್ನು ಮರುಹೊಂದಿಸಬೇಕು. ಮಕ್ಕಳ ಪರಿಸರಕ್ಕೆ ಹೊಂದಿಕೊಂಡಂತೆ ಹೆಚ್ಚು ಸಂದರ್ಭೋಚಿತ ಚಟುವಟಿಕೆಗಳನ್ನು ಆಯೋಜಿಸಬೇಕು. ಶಿಕ್ಷಕರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ತರಬೇತಿ ನೀಡಬೇಕು. ಬೋಧನಾ ಕಲಿಕೆ ಪರಿಕರಗಳ ನೆರವು ನೀಡಬೇಕು. ಶಿಕ್ಷಕರಿಗೆ ಬೋಧಕೇತರ ಕೆಲಸವನ್ನು ನೀಡಬಾರದು. ಕಲಿಕೆಯಲ್ಲಿ ನಿರಂತರತೆಯನ್ನು ಕಾಪಾಡಬೇಕು. ಮಕ್ಕಳ ಸಮಾಜೋ ಭಾವನಾತ್ಮಕ ಅಗತ್ಯಗಳನ್ನು ಪೂರೈಸಬೇಕು- ಮುಂತಾದವು ಕ್ಷೇತ್ರ ಅಧ್ಯಯನದ ಕಾಲದಲ್ಲಿ ಶಿಕ್ಷಕರಿಂದ ಕೇಳಿಬಂದ ಧ್ವನಿಗಳು.

Item Type: Monograph (Other)
Discipline: Education
Programme: Foundation Publications > Field Reports
Title(English): Open Schools, Focus on Recovering Lost Learning: Clear Voice of Teachers
Creators(English): Research Group | Azim Premji Foundation
Publisher: Azim Premji Foundation
URI: http://anuvadasampada.azimpremjiuniversity.edu.in/id/eprint/2594
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.