Advanced Search
Welcome to Anuvada Sampada Repository

ಶಿಕ್ಷಣದಲ್ಲಿ ಕ್ರಾಂತಿ – ಜಾಗತಿಕ ಸಂದರ್ಭದಲ್ಲಿ ಚೀನಾ ಮತ್ತು ಕ್ಯೂಬಾ, 1957– 76

ಚೆಂಗ್, ಯಿಂಗ್ ಹಾಂಗ್ and ಮ್ಯಾನಿಂಗ್, ಪ್ಯಾಟ್ರಿಕ್ (2003) ಶಿಕ್ಷಣದಲ್ಲಿ ಕ್ರಾಂತಿ – ಜಾಗತಿಕ ಸಂದರ್ಭದಲ್ಲಿ ಚೀನಾ ಮತ್ತು ಕ್ಯೂಬಾ, 1957– 76 ಜರ್ನಲ್ ಆಫ್ ವರ್ಲ್ಡ್ ಹಿಸ್ಟರಿ.

[img] Fulltext Document
Revolution in Education.pdf

Download (439kB)

Introduction

ಸೋವಿಯತ್ ಒಕ್ಕೂಟ, ಚೀನಾ, ಕ್ಯೂಬಾ ಮುಂತಾದ ಸಮಾಜವಾದಿ ರಾಷ್ಟ್ರಗಳು ಮತ್ತು ವಸಾಹತುಶಾಹಿ ಹಿಡಿತದಿಂದ ಹೊರಬಂದ ಹಲವು ದೇಶಗಳು ಸಮಾನತೆ ಮತ್ತು ದಕ್ಷತೆ ಎರಡಕ್ಕೂ ಒತ್ತು ನೀಡುವ ಹೊಸ ಶಿಕ್ಷಣ ಪದ್ಧತಿಗಳನ್ನು ರೂಪಿಸಲು ಯತ್ನಿಸಿದವು ಮತ್ತು ಶಿಕ್ಷಣ ಮತ್ತು ದೈಹಿಕ ಶ್ರಮ ಇವುಗಳ ನಡುವಿನ ಅಂತರವನ್ನು ತೊಡೆಯಲು ಯೋಜಿಸಿದವು. ಶಿಕ್ಷಣವು ಭೌತಿಕ ಮತ್ತು ಭೌದ್ಧಿಕ ಅಂಶಗಳ ಸಂಯೋಜನೆಯಾಗಬೇಕೆಂಬ ಚಿಂತನೆ ಹಿಂದಿನಿಂದಲೂ ಇದ್ದುದಾಗಿತ್ತು. ಶಿಕ್ಷಣದ ಬಗೆಗೆ ಈ ದೇಶಗಳು ಅನುಸರಿಸಿದ ಮಾರ್ಗಗಳನ್ನು ಸಾಮಾಜಿಕ ಸಮಾನತೆಗಾಗಿ ಶಿಕ್ಷಣ, ಆಭಿವೃಧ್ಧಿಗಾಗಿ ಶಿಕ್ಷಣ, ಮತ್ತು ಸಮತಾವಾದಕ್ಕಾಗಿ ಶಿಕ್ಷಣ ಎಂದು ವಿಶ್ಲೇಷಿಸಬಹುದು. ಈ ಶೆಕ್ಷಣಿಕ ಪ್ರಯೋಗಗಳು ಪದೇ ಪದೇ ಸಮಾನತೆ ಮತ್ತು ದಕ್ಷತೆಗಳ ನಡುವೆ ಒಂದು ಗುರಿಯಿಂದ ಇನ್ನೊಂದು ಗುರಿಯತ್ತ ಲೋಲಕದಂತೆ ಓಲಾಡಿದವು. ಅದರಿಂದಾಗಿ ವೈಫಲ್ಯಗಳು‌, ವಿನಾಶಕಾರಿ ಪರಿಸ್ಥಿತಿಗಳು ಸಹ ಆಗಾಗ್ಗೆ ಉಂಟಾದವು. ಆದರೂ ಈ ಶೆಕ್ಷಣಿಕ ಪ್ರಯೋಗಗಳು ಬೃಹತ್ತಾದ ಮತ್ತು ಪಥಪ್ರದರ್ಶಕವಾದ ಸಾಮಾಜಿಕ ಆಂದೋಲನಗಳಾಗಿದ್ದುದರಿಂದ ಶೈಕ್ಷಣಿಕ ಚರಿತ್ರೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ಆಸಕ್ತಿದಾಯಕ ಪಾಠಗಳನ್ನು ಒದಗಿಸುತ್ತವೆ.

Item Type: Article
Discipline: Comparative History of Education
Programme: Postgraduate Programmes > MA in Education
Title(English): Revolution in Education: China and Cuba in Global Context. 1957– 76
Creators(English): Cheng Yinghong and Patrick Manning
Publisher: University of Hawai'i Press
Journal or Publication Title(English): Journal of World History
Contributors: Manjunath B R and Ganesh UH
URI: http://anuvadasampada.azimpremjiuniversity.edu.in/id/eprint/4587
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.