Advanced Search
Welcome to Anuvada Sampada Repository

ಮಿಷಿಗನ್‌ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು

ಮಂಜುನಾಥ್, ಎಸ್ ವಿ (2021) ಮಿಷಿಗನ್‌ ಡೈರಿ ಭಾಗ 2: ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು In: ಕಲಿವ ಶಾಲೆಯ ಹಲವು ಮುಖಗಳು. MM Publications, pp. 236-243.

[img] Fulltext Document
ಮಿಷಿಗನ್‌ ಡೈರಿ ಭಾಗ 2 ಅಮೆರಿಕದಲ್ಲಿನ ಶಿಕ್ಷಕ ಶಿಕ್ಷಣ ಕಾರ್ಯಕ್ರಮಗಳ ಸ್ವರೂಪದಿಂದ ಪಡೆದ ಒಳನೋಟಗಳು.pdf

Download (155kB)

Introduction

"ಈ ಬರಹವು 2015ರ ಏಪ್ರಿಲ್‌ನಲ್ಲಿ ಲೇಖಕರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಕೈಗೊಂಡ ಅನುಭವಗಳನ್ನು ಆಧರಿಸಿದೆ. ಅಲ್ಲಿಯ ಶಾಲಾ ಶಿಕ್ಷಣದ ವೈಖರಿಯನ್ನು ಅರಿಯುವುದು ಪ್ರವಾಸದ ಮುಖ್ಯ ಉದ್ದೇಶವಾಗಿದೆ. ಮಿಷಿಗನ್‌ ಸ್ಟೇಟ್‌ ಯೂನಿವರ್ಸಿಟಿಯು ದೇಶದಲ್ಲಿ ಶಿಕ್ಷಕ-ಶಿಕ್ಷಣ ಕೋರ್ಸ್‌ ಹೊಂದಿರುವ ಅಗ್ರಶ್ರೇಣಿಯ ಸಂಸ್ಥೆಗಳಲ್ಲಿ ಒಂದು. ಅಲ್ಲಿಯ ಬೋಧಕವರ್ಗದೊಡನೆ ನಡೆಸಿದ ವಿಚಾರ ವಿನಿಮಯವನ್ನು ಇದರಲ್ಲಿ ಚರ್ಚಿಸಲಾಗಿದೆ. ಜೊತೆಗೆ ವ್ಯವಸ್ಥೆಯ ಒಳಗೆ ಹಾಗೂ ಹೊರಗೆ ಇರುವ ತಜ್ಞರೊಡನೆ ಚರ್ಚಿಸಿ ಶಾಲೆಗಳಿಗೆ ಭೇಟಿ ನೀಡಿ ವಿಷಯವನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಎರಡು ಭಾಗಗಳನ್ನು ಹೊಂದಿರುವ ಸರಣಿ ಬರಹದಲ್ಲಿ ಇದು ಎರಡನೆಯದು. ಈ ಭಾಗದಲ್ಲಿ ಅಮೆರಿಕ ಮತ್ತು ಭಾರತಗಳ ಶಿಕ್ಷಕ-ಶಿಕ್ಷಣ ಕಾರ್ಯಕ್ರಮವನ್ನು ತೌಲನಿಕವಾಗಿ ಪರಿಶೀಲಿಸಲಾಗಿದೆ. ಶಿಕ್ಷಕರಾಗಲು ಸಿದ್ಧತೆ ನಡೆಸುವ ಅಮೆರಿಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿದೆಸೆಯಲ್ಲೇ ಶಿಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ವರ್ಧಿಸಿಕೊಳ್ಳಲು ಅವಕಾಶವಿದೆ, ಶಿಕ್ಷಕ-ಶಿಕ್ಷಣ ಕಾರ್ಯಕ್ರಮದ ಐದನೆಯ ವರ್ಷವು ಇಂಟರ್ನ್‌ಶಿಪ್‌ ತರಬೇತಿಯ ಅವಧಿಯಾಗಿರುತ್ತದೆ. ಬೋಧನೆಯ ಜೊತೆಗೆ ಸಂಶೋಧನೆಗೂ ಅಲ್ಲಿ ತರಬೇತಿ ನೀಡಲಾಗುತ್ತದೆ. ಮುಖ್ಯವಾಗಿ ಮಿಷಿಗನ್‌ ಸ್ಟೇಟ್ ಯೂನಿವರ್ಸಿಟಿಯ ಶಿಕ್ಷಕ-ಶಿಕ್ಷಣ ವಿಭಾಗವು ಉನ್ನತ ಶ್ರೇಣಿ ಹೊಂದಿರುವುದರ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಅಮೆರಿಕಾದ ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಇಂದಿನ ಸವಾಲುಗಳನ್ನು ಸಹ ಪರಿಶೀಲಿಸಲಾಗಿದೆ. ಈ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಭಾರತದ ಶೈಕ್ಷಣಿಕ ಕ್ಷೇತ್ರದ ಸದ್ಯದ ಸನ್ನಿವೇಶ ಹಾಗೂ ಸವಾಲುಗಳನ್ನು ಚರ್ಚಿಸಲಾಗಿದೆ. "

Item Type: Book Section
Discipline: Education
Programme: Collaborative Publications
Publisher: MM Publications
Title of Book(English): KALIVA SHAALEYA HALAVU MUKHAGALU
URI: http://anuvadasampada.azimpremjiuniversity.edu.in/id/eprint/3610
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.