Advanced Search
Welcome to Anuvada Sampada Repository

ಭಾರತೀಯ ಮನೋವಿಜ್ಞಾನ‌

ಜೈಪ್ರಕಾಶ್‌, ಇಂದಿರಾ ಭಾರತೀಯ ಮನೋವಿಜ್ಞಾನ‌ ಮನೋವಿಜ್ಞಾನ. pp. 1-9. (Unpublished)

[img] Fulltext Document
ಭಾರತೀಯ ಮನೋವಿಜ್ಞಾನ‌.pdf

Download (229kB)

Introduction

ಭಾರತೀಯ ಚಿಂತನೆಯಲ್ಲಿ ಮನೋವಿಜ್ಞಾನದ ಧಾತುಗಳು ಇರುವುದನ್ನು ಈ ಲೇಖನದಲ್ಲಿ ಗುರುತಿಸಲಾಗಿದೆ. ಮುಖ್ಯವಾಗಿ ಹಿಂದೂ ಮತ್ತು ಬೌದ್ಧ ಗ್ರಂಥಗಳಲ್ಲಿ ಮನೋವಿಜ್ಞಾನದ ಚಿಂತನೆಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಭಾರತೀಯ ಮನೋವಿಜ್ಞಾನ ಚಿಂತನೆಗೆ ಕ್ರಿಸ್ತಪೂರ್ವ ಕಾಲದಷ್ಟು ಪ್ರಾಚೀನತೆ ಇದ್ದರೂ ಯುರೋಪಿನ ಆಕ್ರಮಣ ಮತ್ತು ಸಾರ್ವಭೌಮತ್ವದ ಕಾರಣದಿಂದಾಗಿ ಆಧುನಿಕ ಯುಗದಲ್ಲಿ ಭಾರತೀಯ ಮನೋವೈಜ್ಞಾನಿಕ ಚಿಂತನೆಗಳು ಮೂಲೆಗುಂಪಾದವು ಎಂಬುದನ್ನು ಈ ಲೇಖನ ಗುರುತಿಸುತ್ತದೆ. ಮುಖ್ಯವಾಗಿ ಪತಂಜಲಿಯ ಯೋಗಸೂತ್ರಗಳು ಟಿಬೆಟ್‌ನ ಬೌದ್ಧ ಧರ್ಮದ ಬೋಧನೆಗಳು, ವೇದ, ಉಪನಿಷತ್ತು ಮತ್ತು ಭಗವದ್ಗೀತೆಗಳನ್ನು ಕುರಿತು ಇದರಲ್ಲಿ ಚರ್ಚಿಸಲಾಗಿದೆ. ಉಪನಿಷತ್ತುಗಳಲ್ಲಿ ವಿವರಿಸಲಾದ ಪಂಚಕೋಶಗಳ ಪರಿಕಲ್ಪನೆ ಮನೋವಿಜ್ಞಾನಕ್ಕೆ ಸಂಬಂಧಿಸಿದ್ದು ಎಂಬುದನ್ನು ಈ ಲೇಖನ ವಿವರಿಸುತ್ತದೆ. ಯೋಗ, ಧ್ಯಾನ ಮುಂತಾದ ವಿಧಾನಗಳಿಂದ ವ್ಯಕ್ತಿತ್ವದ ಸೀಮಿತ ಚೇತನ£ ಅಸೀಮವಾದ ಬ್ರಹ್ಮಾಂಡ ಚೇತನದೊಳಗೆ ವಿಲೀನವಾಗುವ ಪರಿಯನ್ನು ಈ ಲೇಖನವು ಪ್ರಸ್ತಾಪಿಸುತ್ತದೆ. ಭಾರತೀಯ ಮನೋವಿಜ್ಞಾನವು ಧರ್ಮ, ಅಧ್ಯಾತ್ಮ ಮತ್ತು ತತ್ವಶಾಸ್ತ್ರಗಳೊಂದಿಗೆ ಹೊಂದಿರುವ ಅಂತಃಸಂಬಂಧವನ್ನು ಈ ಲೇಖನವು ಗುರುತಿಸುತ್ತದೆ. ನಾಲ್ಕು ಪುರುಷಾರ್ಥಗಳ ವಿಚಾರವೂ ಸಹ ಮನೋವಿಜ್ಞಾನದೊಂದಿಗೆ ಹೊಂದಿರುವ ಸಂಬಂಧವನ್ನು ಇದು ಪ್ರಸ್ತಾಪಿಸುತ್ತದೆ. ಮನೋವಿಜ್ಞಾನಕ್ಕೆ ಯೋಗ ಮತ್ತು ಆಯುರ್ವೇದ ನೀಡಿರುವ ಕೊಡುಗೆಗಳನ್ನು ಈ ಲೇಖನವು ಪರಿಚಯಿಸುತ್ತದೆ.

Item Type: Article
Discipline: Psychology
Programme: Collaborative Publications
Creators(English): Indira Jaiprakash
Journal or Publication Title(English): Psychology
URI: http://anuvadasampada.azimpremjiuniversity.edu.in/id/eprint/3650
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.