Advanced Search
Welcome to Anuvada Sampada Repository

ಆಟ, ಸಂಜ್ಞಾನಾತ್ಮಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಪಂಚ: ಪಿಯಾಜೆ, ವೈಗೋಟ್ಸ್‌ಕಿ ಮತ್ತು ಆಚೆಗೆ

ನಿಕೊಲೊಪೊವ್ಲೊವ್, ಅಗೆಲಿಕಿ (1993) ಆಟ, ಸಂಜ್ಞಾನಾತ್ಮಕ ಬೆಳವಣಿಗೆ ಮತ್ತು ಸಾಮಾಜಿಕ ಪ್ರಪಂಚ: ಪಿಯಾಜೆ, ವೈಗೋಟ್ಸ್‌ಕಿ ಮತ್ತು ಆಚೆಗೆ ಹ್ಯೂಮನ್ ಡೆವಲಪ್ಮೆಂಟ್, 36 (1). pp. 1-23.

[img] Fulltext Document
Play, cognitive development and the social world.pdf

Download (1MB)

Introduction

ಈ ಲೇಖನವು ಆಟ ಮತ್ತು ಸಂಜ್ಞಾನಾತ್ಮಕ ಬೆಳವಣಿಗೆಯ ಕುರಿತಾದ ಸಂಶೋಧನೆಯ ವಿಮರ್ಶಾತ್ಮಕ ಸಮೀಕ್ಷೆ ಮತ್ತು ಅದನ್ನು ತಿಳಿಸಿದ ಎರಡು ಪ್ರಮುಖ ಸೈದ್ಧಾಂತಿಕ ಚೌಕಟ್ಟುಗಳ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ಒದಗಿಸುತ್ತದೆ. ಇತ್ತೀಚಿನವರೆಗೂ, ಈ ಕ್ಷೇತ್ರದಲ್ಲಿ ಪ್ರಬಲವಾದ ಪ್ರಭಾವವು ಪಿಯಾಜೆ ಅವರದ್ದಾಗಿದೆ, ಆಟವನ್ನು ಕುರಿತ ಅವರ ದೃಷ್ಟಿಕೋನವು ಅವರ ಸಂಜ್ಞಾನಾತ್ಮಕ ಬೆಳವಣಿಗೆಯ ಸಿದ್ಧಾಂತದ ಅವಿಭಾಜ್ಯ ಅಂಗವಾಗಿದೆ. ಪಿಯಾಜೆಯನ್ ಸಂಶೋಧನಾ ಕಾರ್ಯಕ್ರಮವು ಸಮಗ್ರವಾಗಿಲ್ಲದರೂ, ಸಾಮಾಜಿಕ-ಸಾಂಸ್ಕೃತಿಕ ಆಯಾಮದ ಅನುಪಸ್ಥಿತಿಯಲ್ಲಿ ಅವರ ವಿಧಾನವು ವೈಗೋಟ್ಸ್ಕಿಯ ಪ್ರಾಬಲ್ಯಕ್ಕೆ ಜಾಗವನ್ನು ಸೃಷ್ಟಿಸಿತು, ಅವರ ಅಭಿವೃದ್ಧಿಯ ಸಿದ್ಧಾಂತವು ಪ್ರಮುಖ ಪರ್ಯಾಯ ರೂಪರೇಖೆಯಾಗಿ ಹೊರಹೊಮ್ಮಿದೆ, ಆದಾಗ್ಯೂ, ಸಂಶೋಧನೆಯ ಈ ಎರಡನೇ ಧಾರೆಯು ಇಲ್ಲಿಯವರೆಗೆ ವೈಗೋಟ್ಸ್ಕಿಯನ್ 'ಸ್ಫೂರ್ತಿ'ಯನ್ನು ಸೀಮಿತ ಮತ್ತು ಅಸಮರ್ಪಕ ರೀತಿಯಲ್ಲಿ ತೆಗೆದುಕೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಪರಸ್ಪರ ಕ್ರಿಯೆಯ ಮೇಲೆ ಅತ್ಯಂತ ಸಂಕುಚಿತವಾಗಿ ಕೇಂದ್ರೀಕೃತವಾಗಿದ್ದು, ಆಟದ ಸಂದರ್ಭವನ್ನು ವ್ಯಾಖ್ಯಾನಿಸುವ ಮತ್ತು ರೂಪಿಸುವ ವಿಶಾಲವಾದ ಸಾಮಾಜಿಕ-ಸಾಂಸ್ಕೃತಿಕ ಅಂಶಗಳನ್ನು ತಿಳಿಸುವುದಿಲ್ಲ. ಹೆಚ್ಚು ಪ್ರಬಲ ಸಂಶೋಧನಾ ದೃಷ್ಟಿಕೋನದ ರೂಪರೇಖೆಯನ್ನು ಸೂಚಿಸುವ ಮೂಲಕ ಲೇಖನವು ಮುಕ್ತಾಯಗೊಳ್ಳುತ್ತದೆ. ಇತರ ಮೂಲಗಳ ಪೈಕಿ, ಈ ವಿಧಾನವು ಪಿಯಾಜೆಯನ್ ಮತ್ತು ವೈಗೋಟ್ಸ್ಕಿಯನ್ ದೃಷ್ಟಿಕೋನಗಳೊಳಗಿನ ಕೆಲವು ಅನ್ವೇಷಿಸದ ಸಾಧ್ಯತೆಗಳ ಮೇಲೆ ರೂಪಿಸಲ್ಪಡುತ್ತದೆ – ಮತ್ತು ಭಾಗಶಃ ಈ ದೃಷ್ಟಿಕೋನಗಳಲ್ಲಿನ ಕೆಲವು ಅಂಶಗಳನ್ನು ಡರ್ಖೈಮ್ ಮತ್ತು ಫ್ರಾಯ್ಡ್‌ನಲ್ಲಿನ ಅವುಗಳ ಆಧಾರಗಳೊಂದಿಗೆ ಮರುಸಂಪರ್ಕಿಸುವ ಮೂಲಕ - ಹಾಗೂ ಗೀರ್ಟ್ಜ್ ಅವರ ಸಾಂಸ್ಕೃತಿಕ ವ್ಯಾಖ್ಯಾನದ ದೃಷ್ಟಿಕೋನದಿಂದ ಪಡೆದುಕೊಳ್ಳುತ್ತಾ ಸೃಜಿಸಲ್ಪಡುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Play, cognitive development and the social world: Piaget, Vygotsky, and beyond
Creators(English): Nicolopoulou A
Publisher: Karger Publishers
Journal or Publication Title(English): Human Development
Contributors: Lalitha Bhat and Shailaja GP
URI: http://anuvadasampada.azimpremjiuniversity.edu.in/id/eprint/4594
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.