Advanced Search
Welcome to Anuvada Sampada Repository

"ಪರೋಪಕಾರಿ ಮತ್ತು ಪ್ರಭಾವಿ ಹೂಡಿಕೆದಾರರು: ಖಾಸಗಿ ವಲಯದ ಪಾಲ್ಗೊಳ್ಳುವಿಕೆ, ಸಂಕರತೆ (hybridity) ಮತ್ತು ವ್ಯಾಖ್ಯಾನದ ಸಮಸ್ಯೆಗಳು"

ಶ್ರೀವಾಸ್ತವ, ಪ್ರಾಚಿ and ರೀಡ್, ರಾಬಿನ್ (2019) "ಪರೋಪಕಾರಿ ಮತ್ತು ಪ್ರಭಾವಿ ಹೂಡಿಕೆದಾರರು: ಖಾಸಗಿ ವಲಯದ ಪಾಲ್ಗೊಳ್ಳುವಿಕೆ, ಸಂಕರತೆ (hybridity) ಮತ್ತು ವ್ಯಾಖ್ಯಾನದ ಸಮಸ್ಯೆಗಳು" ಫಿಲಾಂಥ್ರೊಪಿ ಇನ್ ಎಜುಕೇಶನ್: ಡೈವರ್ಸ್ ಪರ್ಸ್‌ಪೆಕ್ಟಿವ್ಸ್ ಅಂಡ್ ಗ್ಲೋಬಲ್ ಟ್ರೆಂಡ್ಸ್.

[img] Fulltext Document
Philanthropic and Impact Investors.pdf

Download (585kB)

Introduction

ಜಾಗತಿಕ ಶಿಕ್ಷಣದಲ್ಲಿ ರಾಜ್ಯೇತರ-ಖಾಸಗಿ ಕಾರ್ಯಭಾಗಿಗಳ ಸಂಖ್ಯೆ ಮತ್ತು ವ್ಯಾಪ್ತಿಯ ವೃದ್ಧಿಯ ಜೊತೆಗೆ, ಹೂಡಿಕೆಯ ಕಾರ್ಯವಿಧಾನಗಳಲ್ಲಿ ವಿಭಿನ್ನತೆಯನ್ನು ಕಾಣಬಹುದಾಗಿದೆ. ಹೂಡಿಕೆದಾರರು ಸಾಮಾಜಿಕ ಪ್ರಭಾವದ ಕಡೆಗೆ ಹೆಚ್ಚಾಗಿ ಗಮನಹರಿಸುತ್ತಿದ್ದಾರೆ. ಶಿಕ್ಷಣದ ಹಣಕಾಸು ಪೋಷಕರಾಗಿ ಕಾರ್ಯನಿರ್ವಹಿಸುವ ಖಾಸಗಿ ಪ್ರತಿಷ್ಠಾನಗಳು ಹಾಗೂ ಪ್ರಭಾವಿ ಹೂಡಿಕೆದಾರರನ್ನು ಕುರಿತಂತೆ ಈ ಅಧ್ಯಯನವನ್ನು ಕೇಂದ್ರೀಕರಿಸಲಾಗಿದ್ದು, ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶವನ್ನು ಕ್ರೋಢೀಕರಿಸಲಾಗಿದೆ. ಸಂಸ್ಥೆಗಳ ಸ್ವರೂಪದ ಕುರಿತು ತಾರ್ಕಿಕವಾಗಿ ರೂಪಿತವಾದ ಕಾರ್ಯಾತ್ಮಕ ವರ್ಗೀಕರಣದ ಚರ್ಚೆಯನ್ನು ಇಲ್ಲಿ ಕಾಣಬಹುದು. ವಿವೇಚನಾತ್ಮಕ ವಿಧಾನವನ್ನು ಬಳಸಿಕೊಂಡು ಪೂರ್ವ ನಿರ್ಧರಿತ ವ್ಯಾಖ್ಯಾನಗಳನ್ನು ಪರಿಷ್ಕರಿಸಲಾಗಿದೆಯಲ್ಲದೆ, ವಿದ್ವತ್‌ಪೂರ್ಣ ಬರಹಗಳ ಜೊತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಖಾಸಗಿ ವಲಯದ ಸಂಸ್ಥೆಗಳಿಂದ ಲಭ್ಯವಾಗುವ ವರದಿಗಳು ಮತ್ತು ಇತರ ಸಾಹಿತ್ಯವನ್ನು ಸಂಗ್ರಹಿಸಲಾಗಿದೆ. ಸಾಮಾಜಿಕ ಉದ್ಯಮವು ಔದ್ಯಮಿಕ ದೃಷ್ಟಿಕೋನಗಳು ಮತ್ತು ವ್ಯಾವಹಾರಿಕ ತತ್ತ್ವಗಳ ಮೂಲಕ ಸಾಮಾಜಿಕ ಮತ್ತು ಪಾರಿಸರಿಕ ಉದ್ದೇಶಗಳನ್ನು ಅನುಸರಿಸುವ ವಾಣಿಜ್ಯ ಸಂಸ್ಥೆಯೆಂದು ವಿವರಿಸಲ್ಪಟ್ಟಿದೆ. ಪೂರ್ವ ನಿರ್ಧರಿತ ವ್ಯಾಖ್ಯಾನಗಳ ಆಧಾರದ ಮೇಲೆ ಸಂಸ್ಥೆಗಳನ್ನು ವರ್ಗೀಕರಿಸುವುದು ಉಪಯುಕ್ತವೇ ಅಥವಾ ಸಾಧ್ಯವೇ ಎಂಬುದರ ಮರುಪರಿಶೀಲನೆಯು ಈ ಅಧ್ಯಯನದಲ್ಲಿ ಲಭ್ಯವಿದೆ.

Item Type: Article
Discipline: Education
Programme: Postgraduate Programmes > MA in Economics
Title(English): Philanthropic and Impact Investors: Private Sector Engagement, Hybridity and the Problem of Definition
Creators(English): Prachi Srivastava, Robyn Read
Publisher: Edward Elgar Publishing
Journal or Publication Title(English): Philanthropy in Education: Diverse Perspectives and Global Trends
Contributors: Translator: Reshma T B ; Reviewer: Shailaja GP
URI: http://anuvadasampada.azimpremjiuniversity.edu.in/id/eprint/5844
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.